NEET ಅಕ್ರಮ ಖಂಡಿಸಿ ಪ್ರತಿಭಟನೆ ಬಗ್ಗೆ ಯುವರಾಜ್ ಸಿಂಗ್, ಶಿಖರ್ ಧವನ್ ರಿಪ್ಲೈ; ಇಬ್ಬರದ್ದೂ ಒಂದೇ ಮನವಿ!
Here's what's trending across India right now:
ಲೇಖಕರ ಬಗ್ಗೆ ಗಣೇಶ್ ಪ್ರಸಾದ್ ಕುಂಬ್ಳೆ ವಿಜಯ ಕರ್ನಾಟಕದ ವೆಬ್ ಸೈಟ್ ವಿಭಾಗದಲ್ಲಿ ಸೀನಿಯರ್ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಳೆದ 3 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಗಣೇಶ್ ಪ್ರಸಾದ್ ಕುಂಬ್ಳೆ ಅವರು ಪತ್ರಿಕೋದ್ಯಮದಲ್ಲಿ 18 ವರ್ಷಗಳ ಅನುಭವ ಹೊಂದಿದ್ದಾರೆ. ಈ ಹಿಂದೆ ರಾಜ್ಯ, ಕ್ರೀಡೆ, ಪುರವಣಿ ಹೀಗೆ ಸುದ್ದಿಮನೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಪ್ರಸ್ತುತ ವಿಜಯ ಕರ್ನಾಟಕ ವೆಬ್ ಸೈಟ್ ನ ಕ್ರೀಡಾ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ. ಪದವಿ ವ್ಯಾಸಂಗವನ್ನು ಪತ್ರಿಕೋದ್ಯಮದ ಗರಡಿ ಮನೆ ಎಂದೇ ಹೆಸರಾದ ಉಜಿರೆ ಎಸ್ ಡಿಎಂ ಕಾಲೇಜಿನಲ್ಲಿ ಮಾಡಿದರು. ಪತ್ರಿಕೋದ್ಯಮದ ವಿದ್ಯಾರ್ಥಿ ಅಲ್ಲದಿದ್ದರೂ ಸಾಹಿತ್ಯ ಮತ್ತು ಬರೆವಣಿಗೆ ಮೇಲಿನ ಆಸಕ್ತಿಯಿಂದಾಗಿ ಮಾಧ್ಯಮ ಜಗತ್ತಿನ ಬಗ್ಗೆ ಕುತೂಹಲವಿತ್ತು. ವಿದ್ಯಾರ್ಥಿ ದೆಸೆಯಿಂದಲೇ ನಾಡಿನ ವಿವಿಧ ಪತ್ರಿಕೆಗಳಲ್ಲಿ ಇವರ ಲೇಖನ, ಕತೆ, ಕವನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಅಧ್ಯಯನದ ವೇಳೆ ಓದು ಮತ್ತು ಬರೆಹದ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಿತು. ಆ ಸಂದರ್ಭದಲ್ಲಿ ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕಾಗಿ ನಡೆಸುವ ಕಥಾ ಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿಭಾಗದ ವಿಶೇಷ ಬಹುಮಾನ ಸಹ ಇವರಿಗೆ ಲಭಿಸಿತ್ತು. ಕನ್ನಡದಲ್ಲಿ ಎಂಎ ಪದವಿ ಮಾಡುತ್ತಿದ್ದ ವೇಳೆ ಇವರು ಯುಜಿಸಿ ನಡೆಸುವ ಎನ್ಇಟಿ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲೇ ಪಾಸಾಗಿದ್ದರು. ಓದು ಮುಗಿದ ಮೇಲೆ ಒಂದು ವರ್ಷ ಅತಿಥಿ ಉಪನ್ಯಾಸಕರಾಗಿದ್ದರು ಸಹ. ಆದರೆ ಪತ್ರಿಕೋದ್ಯಮದ ಮೇಲಿನ ಅಪಾರ ಪ್ರೀತಿ ಅವರನ್ನು ಮಾಧ್ಯಮ ಜಗತ್ತಿನ ಕಡೆಗೆ ಸೆಳೆಯಿತು. ಕನ್ನಡ ನಾಡಿನ ಪ್ರತಿಷ್ಠಿತ ಮ್ಯಾಗಝೀನ್ ಗಳಲ್ಲೊಂದಾಗಿರುವ ಸಂಯುಕ್ತ ಕರ್ನಾಟಕ ಬಳಗದ ಕರ್ಮವೀರ ವಾರಪತ್ರಿಕೆಯಲ್ಲಿ ಒಂದು ವರ್ಷ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಬಳಿಕ ಕನ್ನಡ ಪ್ರಭದಲ್ಲಿ ನಿರಂತರ 14 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಪಳಗಿದರು. ಮುಖ್ಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದ ಅವರು ವಿಶೇಷವಾಗಿ ಕ್ರೀಡಾ ವಿಭಾಗ, ರಾಜ್ಯ ಡೆಸ್ಕ್ ಗಳಲ್ಲಿ ಪರಿಣತಿಯನ್ನು ಪಡೆದರು. ದೆಹಲಿ, ಕೋಲ್ಕತಾ, ಮುಂಬೈ, ರಾಂಚಿ ಮೊದಲಾದೆಡೆ ತೆರಳಿ ಪ್ರೊ ಕಬಡ್ಡಿ ವಿಶೇಷ ವರದಿ, ಸಂದರ್ಶನಗಳನ್ನು ಮಾಡಿದ ಅನುಭವ ಅವರಿಗಿದೆ. 2022ರ ಸೆಪ್ಟೆಂಬರ್ ನಿಂದ ಪ್ರತಿಷ್ಠಿತ ವಿಜಯ ಕರ್ನಾಟಕ ವೆಬ್ ಸೈಟ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರು ಡಿಜಿಟಲ್ ವರದಿಗಾರಿಕೆಯ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ಕ್ರಿಕೆಟ್, ಕಬಡ್ಡಿ, ಫುಟ್ಬಾಲ್, ಟೆನಿಸ್, ಚೆಸ್, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ರೀಡೆಗಳ ಆಳ- ವಿಸ್ತಾರಗಳನ್ನು ಬಲ್ಲ ಇವರು ಕ್ರಿಕೆಟ್ ಕುರಿತಾದ ನವಿರಾದ ನಿರೂಪಣೆ ಮತ್ತು ಸಮರ್ಪಕ ವಿಶ್ಲೇಷಣೆ ಮಾಡುವುದರಲ್ಲಿ ಎತ್ತಿದ ಕೈ. ಕ್ರೀಡೆ ಮಾತ್ರವಲ್ಲದೆ ಅಗತ್ಯ ಬಿದ್ದಾಗ ರಾಜ್ಯ ಮತ್ತು ರಾಷ್ಟ್ರ ರಾಜಕೀಯ, ಅಂತಾರಾಷ್ಟ್ರೀಯ ವಿದ್ಯಮಾನಗಳ ಬಗ್ಗೆಯೂ ಬರೆಯಬಲ್ಲರು. ... ಇನ್ನಷ್ಟು ಓದಿ
Source: Vijay Karnataka